ಶ್ರೀ ರಾಮ ರಾಮ ರಾಮೇತೀ ರಮೇ ರಾಮೇ ಮನೋರಮೇ
ಸಹಸ್ರ ನಾಮ ತತ್ತುಲ್ಯಂ ರಾಮ ನಾಮ ವರಾನನೇ॥

ಅಯೋಧ್ಯೆಯಲ್ಲಿ ರಾಮನ ಮಂದಿರ ಉದ್ಘಾಟನೆಯಾಗುತ್ತಿದೆ. ಸನಾತನ ಧರ್ಮದ ಅನುಯಾಯಿಗಳಿಗೆ ಇದು ದೊಡ್ಡ ವಿಷಯವಾಗಿದೆ.
ರಾಮನ ಕುರಿತು ಯಾವುದೇ ಪಠಣ, ಓದುವಿಕೆ ಮತ್ತು ಚಿಂತನೆಯು ನಮಗೆ ಬಹಳ ಪ್ರಯೋಜನಕಾರಿಯಾಗಿದೆ. ಈ ಶುಭ ಸಮಯದಲ್ಲಿ ಭಗವಾನ್ ಶ್ರೀರಾಮನ ಕುರಿತು ಇನ್ನಷ್ಟು ಓದೋಣ ಮತ್ತು ಪುಣ್ಯವನ್ನು ಪಡೆಯೋಣ.
ಶ್ರೀರಾಮ ತಮ್ಮ ತಂದೆಯ ವಾಗ್ದಾನವನ್ನು ಪೂರೈಸಲು ಎಲ್ಲಾ ಐಷಾರಾಮಿಗಳನ್ನು ತೊರೆದು ವನವಾಸಕ್ಕೆ ಹೋದರು.ತನ್ನ ಮನಸ್ಸು ಮತ್ತು ಇಂದ್ರಿಯಗಳ ಮೇಲೆ ಪರಿಪೂರ್ಣ ನಿಯಂತ್ರಣ ಹೊಂದಿರುವ ಮಾನವನಿಗೆ ಮಾತ್ರ ಎಲ್ಲಾ ಐಷಾರಾಮಿಗಳನ್ನು ತೊರೆದು ಕಷ್ಟಕರವಾದ ಜೀವನವನ್ನು ಆಯ್ಕೆ ಮಾಡಲು ಸಾಧ್ಯ. ಅಂತಹ ವ್ಯಕ್ತಿಯು ಆದರ್ಶ ಮನುಷ್ಯನಾಗುತ್ತಾನೆ ಮತ್ತು ಇತರರಿಗೆ ಮಾದರಿಯಾಗುತ್ತಾನೆ. ಆದರ್ಶ ಮಾನವರು ಉತ್ಕೃಷ್ಟತೆಗಾಗಿ ಶ್ರಮಿಸಲು, ಸವಾಲುಗಳನ್ನು ಜಯಿಸಲು ಮತ್ತು ಅವರ ಸಂಪೂರ್ಣ ಸಾಮರ್ಥ್ಯವನ್ನು ತಲುಪಲು ವ್ಯಕ್ತಿಗಳನ್ನು ಪ್ರೇರೇಪಿಸುತ್ತಾರೆ.
ಸ ತು ನಿತ್ಯಂ ಪ್ರಶಾನ್ತಾತ್ಮಾ ಮೃದುಪೂರ್ವಂ ಚ ಭಾಷತೇ.
ಉಚ್ಯಮಾನೋಪಿ ಪರುಷಂ ನೋತ್ತರಂ ಪ್ರತಿಪದ್ಯತೇ৷৷2.1.10৷৷
ಯಾರಾದರೂ ರಾಮನನ್ನು ಕಟುವಾದ ಮಾತುಗಳಲ್ಲಿ ಮಾತನಾಡಿದರೂ ಅವರು ಎಂದಿಗೂ ಕಟುವಾಗಿ ಪ್ರತಿಕ್ರಿಯಿಸಲಿಲ್ಲ
ಬುದ್ಧಿಮಾನ್ಮಧುರಾಭಾಷೀ ಪೂರ್ವಭಾಷೀ ಪ್ರಿಯಂವದಃ.
ವೀರ್ಯವಾನ್ನ ಚ ವೀರ್ಯೇಣ ಮಹತಾ ಸ್ವೇನ ವಿಸ್ಮಿತಃ৷৷2.1.13৷৷
ಬುದ್ಧಿವಂತ ಮತ್ತು ಮೃದು ಸ್ವಭಾವದ ಅವರು ಕೇಳಲು ಆಹ್ಲಾದಕರವಾದ ಮಾತುಗಳನ್ನು ಇತರರೊಂದಿಗೆ ಮಾತನಾಡಲು ಮೊದಲಿಗರು. ಪರಾಕ್ರಮಶಾಲಿಯಾಗಿದ್ದರೂ, ತನ್ನ ಅಗಾಧ ಶಕ್ತಿಯ ಬಗ್ಗೆ ಅವರು ಎಂದಿಗೂ ಹೆಮ್ಮೆಪಡಲಿಲ್ಲ.
ನಚಾನೃತಕಥೋ ವಿದ್ವಾನ್ ವೃದ್ಧಾನಾಂ ಪ್ರತಿಪೂಜಕಃ.
ಅನುರಕ್ತಃ ಪ್ರಜಾಭಿಶ್ಚ ಪ್ರಜಾಶ್ಚಾಪ್ಯನುರಞ್ಜತೇ৷৷2.1.14৷৷
ಶ್ರೀರಾಮ ಎಂದೂ ಸುಳ್ಳನ್ನು ಮಾತನಾಡಿಲ್ಲ.
ರಾಮನ ಇತರ ಆದರ್ಶಾತ್ಮಕ ಗುಣಗಳು
- ಅವರು ತಮ್ಮ ಗುರುಗಳು ಮತ್ತು ಹಿರಿಯರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದರು.
- ಪ್ರತಿಕೂಲ ಸಂದರ್ಭಗಳಲ್ಲಿಯೂ ಅವರು ಶಾಂತವಾಗಿದ್ದರು.
- ಶ್ರೀರಾಮ ತಮ್ಮ ಸಹೋದರರನ್ನು ಪ್ರೀತಿಸುತ್ತಿದ್ದರು ಮತ್ತು ಅವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದರು.
- ಶ್ರೀರಾಮ ಯಾರನು ದ್ವೇಷಿಸುತಿರಲಿಲ್ಲ. ತಪ್ಪು ಮಾಡಿದವರಿಗೆ ಮಾರ್ಗದರ್ಶನ ನೀಡಿ ಕ್ಷಮಿಸುತ್ತಿದ್ದರು.
- ಶ್ರೀರಾಮ ಎಲ್ಲ ಜೀವಿಗಳನ್ನು ಸಮಾನವಾಗಿ ಪ್ರೀತಿಸುತ್ತಿದ್ದರು.
- ಶ್ರೀರಾಮ ಎಂದೂ ತನ್ನ ಗುರಿಯನ್ನು ಕಳೆದುಕೊಳ್ಳಲಿಲ್ಲ. ಅವರು ಸೀತೆಯನ್ನು ಹುಡುಕಲು ಹೊರಟರು ಮತ್ತು ಬಹಳಷ್ಟು ಕಷ್ಟಗಳನ್ನು ಎದುರಿಸಿದರು. ಅಂತಿಮವಾಗಿ ಅವರು ರಾವಣನನ್ನು ಕೊಂದು ಸೀತೆಯನ್ನು ಪಡೆದರು.ಇದು ಶ್ರೀರಾಮ ಸೀತೆಯನ್ನು ಎಷ್ಟು ಪ್ರೀತಿಸುತ್ತಿದ್ದರು ಎಂದು ತೋರಿಸುತ್ತದೆ.
ಇನ್ನು ರಾಮ ನಾಮ ಜಪ ಮಾಡುವದರಿಂದ ಮೋಕ್ಷ ಪ್ರಾಪ್ತಿ ಆಗುತದೆಯೆನ್ನುವ ನಂಬಿಗೆ ಸನಾತನ ದರ್ಮದಲಿ ಇದೆ. ರಾಮ ಕೋಟಿ ಬರಿಯೋದು ಕೂಡ ಉಂಟು.
ನಮ್ಮ ಪುರಂದರ ದಾಸರು ಹೇಳಿದಾರೇ ರಾಮ ಮಂತ್ರವ ಜಪಿಸೋ ಹೇ ಮನುಜ ಎಂದು. ಜಪಿಸೋಣ ಮತ್ತು ರಾಮನ ಕೃಪೆಗೆ ಪತ್ರರಾಗೋಣ.
ರಾಮ ಮಂತ್ರವ ಜಪಿಸೋ ಹೇ ಮನುಜ|| ಪ ||
ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ|| ಅ.ಪ ||
ಕುಲಹೀನನಾದರು ಕೂಗಿ ಜಪಿಸುವ ಮಂತ್ರ
ಸಲೆ ಬೀದಿ ಬೀದಿಯೊಳು ನುಡಿವ ಮಂತ್ರ
ಹಲವು ಪಾಪಂಗಳ ಹತಗೊಳಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ ಸೂರೆಗೊಂಬುವ ಮಂತ್ರ|| ೧ ||
ಸ್ನಾನ ಮೌನಂಗಳಿಗೆ ಸಾಧನದ ಮಂತ್ರ
ಜ್ಞಾನಿಗಳು ಮನದಿ ಧ್ಯಾನಿಪ ಮಂತ್ರ
ಹೀನ ಗುಣಂಗಳ ಹಿಂಗಿಸುವ ಮಂತ್ರ
ಏನೆಂಬೆ ವಿಭೀಷಣಗೆ ಪಟ್ಟಗಟ್ಟಿದ ಮಂತ್ರ || ೨ ||
ಸಕಲ ವೇದಂಗಳಿಗೆ ಸಾರವೆನಿಪ ಮಂತ್ರ
ಮುಕುತಿ ಮಾರ್ಗಕೆ ಇದೆ ಮೂಲ ಮಂತ್ರ
ಭಕುತಿ ರಸಕೆ ಬಟ್ಟೆ ಒಮ್ಮೆ ತೋರುವ ಮಂತ್ರ
ಸುಖ ನಿಧಿ ಪುರಂದರ ವಿಠಲನ ಮಂತ್ರ|| ೩ ||

Leave a comment